Search in the website:

Pradyumna Narahalli

A mechanical engineer who quit a software company to do MBA in media, got into an ad agency before he worked in a newspaper, finally ended up in a Kannada entertainment channel.
Theatre, mimicry, stand-up comedy, anchoring, acting, singing, writing, advertising & branding interests him. He loves juggling his interests sponsored by immense optimism, powered by madness, associated with right attitude.
He has partnered as a script writer & talk back for Kiccha Sudeep in Bigg Boss Season 2, with Ramesh Aravind in Weekend with Ramesh Season 2, with Master Anand for Drama Juniors and with Anushree in Saregamapa. He has directed many events, reality shows and has worked for many fiction shows.

His life’s mantra is to ‘Be crazy’, ‘Love Challenges’, ‘Dream Big’ and ‘Smile4ever!’

 

ಆರ್ ಜೆ ಪ್ರದ್ಯುಮ್ನ ನರಹಳ್ಳಿ – “ಇವನು ಸಕಲಕಲಾವಲ್ಲಭ, ಇವನಿಗೆ ಹಲವು-ಕಲಾ-ಸುಲಭ”!
ಒಬ್ಬ ಮೆಕ್ಯಾನಿಕಲ್ ಎಂಜಿನಿಯರ್ ಸಾಫ್ಟ್ ವೇರ್ ಕಂಪನಿ ಕೆಲಸ ಬಿಟ್ಟು, ಮೀಡಿಯಾದಲ್ಲಿ ಎಂ.ಬಿ.ಎ ಮಾಡಿ, ಆಡ್ ಏಜನ್ಸಿಯೊಂದಕ್ಕೆ ಸೇರಿ, ಆನಂತರ ಕನ್ನಡ ಪೇಪರ್ ಒಂದಕ್ಕೆ ಹಾರಿ, ಕೊನೆಗೆ ಕನ್ನಡ ಮನೋರಂಜನ ವಾಹಿನಿಯ ಭಾಗವಾದ ಕಥೆ ಇವನದ್ದು.
ರಂಗಭೂಮಿ, ಮಿಮಿಕ್ರಿ, ಹಾಸ್ಯ, ನಿರೂಪಣೆ, ನಟನೆ, ಗಾಯನ, ಬರವಣಿಗೆ, ಜಾಹಿರಾತು ಹಾಗೂ ಬ್ರಾಂಡಿಂಗ್ ಇವನ ಆಸಕ್ತಿ. ಇವನ ಈ ವೈವಿಧ್ಯ ಆಸಕ್ತಿಗಳ ನಿರ್ವಹಣೆಗೆ ಸಹಕಾರಿಯಾಗಿರುವುದು ಇವನ ಅತೀವ ಆಶಾವಾದ, ಹುಚ್ಚುತನದ ಪ್ರಾಯೋಜಕತ್ವ ಮತ್ತು ಇದರ ಜೊತೆ ಸದ್ಮನೋಭಾವ.
ಇವನು ಒಬ್ಬ ಬರಹಗಾರ ಹಾಗೂ ಟಾಕ್ ಬ್ಯಾಕ್ ಕೊಡುವವನಾಗಿ ಕಿಚ್ಚ ಸುದೀಪ್ ಅವರ ಜೊತೆ ಬಿಗ್ ಬಾಸ್ ಸೀಸನ್ 2ರಲ್ಲಿ ಮತ್ತು ರಮೇಶ್ ಅರವಿಂದ್ ಅವರ ಜೊತೆ ವೀಕೆಂಡ್ ವಿಥ್ ರಮೇಶ್ ಸೀಸನ್ 2ರಲ್ಲಿ ಕೆಲಸ ಮಾಡಿದ್ದಾನೆ. ಹಲವು ಇವೆಂಟುಗಳು, ರಿಯಾಲಿಟಿ ಶೋಗಳ ನಿರ್ದೇಶನ ಸೇರಿದಂತೆ, ಹಲವು ಧಾರಾವಾಹಿಗಳ ಹಿಂದೆಯೂ ಕೆಲಸ ಮಾಡಿದ್ದಾನೆ.

ಇವನ ಜೀವನದ ಮಂತ್ರಗಳು – ‘ಹುಚ್ಚನ್ನ ಮೆಚ್ಚಿ’, ‘ಸವಾಲನ್ನು ಲವ್ ಮಾಡಿ’, ‘ದೊಡ್ಡ ಕನಸು ಕಾಣಿ’ ಮತ್ತು ‘ಸದಾ ನಗುತ್ತಿರಿ’!